12/11/2023
🙏🌷🙏 *ಶುಭೋದಯ* 🙏🌷🙏
ಈ ಗ್ರೂಪಿನ ಸಮಸ್ತ ಸದಸ್ಯರಿಗೂ,ಅವರ ಬಂಧು ಮಿತ್ರರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಈಗತಾನೆ ನವರಾತ್ರಿ ಆಚರಿಸಿದ್ದೇವೆ. ಈಗ ಪುನಃ ಸರಣಿ ಹಬ್ಬಗಳು. ಇದೇ ಹಿಂದೂ ಧರ್ಮದ ವೈಶಿಷ್ಟ್ಯ. ಪ್ರತಿ ಹಬ್ಬದ ಹಿಂದೆಯೂ ಒಂದು ಐತಿಹ್ಯವಿರುತ್ತದೆ. ಹಬ್ಬವೆಂದರೆ ಸುಮ್ಮನೆ ಹಬ್ಬದೂಟ ಮಾಡಿ ಮಲಗುವುದು ಮಾತ್ರವಲ್ಲ. ಪ್ರತೀ ಹಬ್ಬದಲ್ಲೂ ನಮ್ಮ ದೇವರನ್ನು, ತಂದೆತಾಯಂದಿರನ್ನು, ಗುರು ಹಿರಿಯರನ್ನು, ವಂದಿಸಿ ಆಶೀರ್ವಾದ ಪಡೆಯಬೇಕು. ಇಷ್ಟೇ ಅಲ್ಲದೆ ಕಾಲವಾದ ನಮ್ಮ ಪೂರ್ವಜರಿಗೂ ಕೂಡಾ ನಮಿಸಿ ಗೌರವಿಸಬೇಕು. ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸಿ ಒಬ್ಬರಿಗೊಬ್ಬರು ಮನೆ ಸದಸ್ಯರೆಲ್ಲ ಅಭಿವಂದಿಸಿ ಹಾಗೆಯೇ ನೆರೆಹೊರೆಯವರರೊಂದಿಗೆ ಸಂಭ್ರಮಿಸುವುದು ಕೂಡ ನಮ್ಮ ಹಬ್ಬಗಳ ಒಂದು ವಿಶೇಷ. ಸದಾ ನಮ್ಮ ಮೇಲೆ ದೇವರ, ಗುರು ಹಿರಿಯರ ಕೃಪಾಶೀರ್ವಾದಗಳಿರಬೇಕು. ಹಾಗಿದ್ದಾಗ ಮಾತ್ರ ಸ್ವಸ್ಥ, ಶಾಂತ ಸಮಾಜ ಇರಲು ಸಾಧ್ಯ.
ಈಗ ನರಕ ಚತುರ್ದಶಿ (ನರಕಾಸುರ ವಧೆ,ಅಭ್ಯಂಜನ), ಅಮಾವಾಸ್ಯೆ, ದೀಪಾವಳಿ, ಅಂಗಡಿ ಪೂಜೆ , ಬಲಿಪಾಡ್ಯಮಿ, ಗೋಪೂಜೆ ,ತುಳಸಿ ಹಬ್ಬ, ಉತ್ಥಾನ ದ್ವಾದಶಿ ಹೀಗೆ ಸರಣಿ ಹಬ್ಬಗಳು. ಈ ಹಬ್ಬಗಳ ಹಿಂದೆಯೂ ದುಷ್ಟ ಶಿಕ್ಷಣೆ , ಶಿಷ್ಟ ರಕ್ಷಣೆಯ ಐತಿಹ್ಯವೇ ಅಡಗಿದೆ. ಈ ಹಬ್ಬದಲ್ಲಿ ನಾವು ದುಷ್ಟ ಶಕ್ತಿಗಳ ನಾಶಕದ ಸೂಚಕವಾಗಿ ಸಿಡಿಮದ್ದು , ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತೇವೆ, ಸಿಹಿ ಹಂಚುತ್ತೇವೆ . ಇದು ಹಿಂದಿನಿಂದಲೂ ನಡೆದು ಬಂದ ಆಚರಣೆಗಳು. ಇದು ಹೀಗೆಯೇ ಮುಂದುವರಿಯಬೇಕು.
ಅನಾಚಾರಗಳು ಹೆಚ್ಚಿದಾಗಲೆಲ್ಲಾ ಈ ಲೋಕವನ್ನುಳಿಸಲು ಲೋಕೋದ್ಧಾರಕ ಭಗವಂತನ ಅವತಾರವಾಗಿದೆ . ಇನ್ನು ಮುಂದೆಯೂ ಇದು ಮುಂದುವರಿಯುತ್ತದೆ.
ಈಗಲೂ ಮತ್ತೆ ಮತ್ತೆ ಲೋಕದಲ್ಲೆಲ್ಲಾ ಹಿಂಸೆ, ಅನಾಚಾರ ಹೆಚ್ಚುತ್ತಿದೆ. ಇದನ್ನು ಎಲ್ಲಾ ಬುದ್ಧಿ ಇರುವ ನಾಗರಿಕರು ಖಂಡಿಸಲೇಬೇಕು. ನಮ್ಮ ರಾಜ್ಯದಲ್ಲಿ ಅಥವಾ ನೆರೆರಾಜ್ಯಗಳಲ್ಲಿ ಇಂತಹ ಉಗ್ರವಾದತ್ವವನ್ನು ಬೆಂಬಲಿಸಿ ಸಭೆ ಸಮಾರಂಭಗಳನ್ನು ನಡೆಸುತ್ತಿರುವುದು ವಿಷಾದನೀಯ.
*“ವಸುಧೈವ ಕುಟುಂಬಕಮ್”* ಎಂದು ಸಾರಿದ ನಾವು ಈಗ ಹತಾಶರಾಗಿದ್ದೇವೆ. ಇಡೀ ಭೂಮಂಡಲದ ರಾಷ್ಟ್ರಗಳು ಇಗ್ಭಾಗವಾಗಿ ಒಬ್ಬರಮೇಲೊಬ್ಬರು ಕತ್ತಿಮಸೆಯುವ ಸನ್ನಿವೇಶ ಎದುರಾಗಿದೆ. ನಮ್ಮ ಭಾರತ ಮಾತ್ರವೇ ತಟಸ್ಥ ರೀತಿ ಅನುಸರಿಸುತ್ತಾ, ಉಗ್ರವಾದವನ್ನು ಖಂಡಿಸುತ್ತಾ ಶಾಂತಿ ಸ್ಥಾಪನೆಗಾಗಿ ಕೈಲಾದ ಪ್ರಯತ್ನವನ್ನು ಮಾಡುತ್ತಿದೆ. ಈಗ ಭುವಿಯಲ್ಲಿ ಉಳಿದಿರುವುದು ಎರಡೇ ಮಾರ್ಗ. ಶಾಂತಿ ಸ್ಥಾಪನೆ ಅಥವಾ ಮೂರನೇ ವಿಶ್ವ ಮಹಾಯುದ್ಧ. ಯುದ್ಧ ನಡೆದಲ್ಲಿ ಯಾರಿಗೂ ಉಳಿಗಾಲವಿಲ್ಲ. ಯುದ್ಧ ನಡೆದಲ್ಲಿ ಇಡೀ ವಿಶ್ವ ನಾಗರಿಕತೆಯೇ ಮೂವತ್ತು ನಲವತ್ತು ವರ್ಷಗಳಷ್ಟು ಹಿಂದೆ ಹೋಗಬಹುದು.
ಇತರ ದೇಶದಲ್ಲಿ ನಡೆದ ಬಂಡುಕೋರರ ಅಟ್ಟಹಾಸ ಇಲ್ಲಿ ನಡೆಯುವುದಿಲ್ಲ ಎನ್ನಲು ಸಾಧ್ಯವೇ ಇಲ್ಲ. ಇಡೀ ಪ್ರಪಂಚವೇ ಈಗ ಅಸುರಕ್ಷಿತ. ಎಲ್ಲೆಲ್ಲೂ ಭೂಗತ ಉಗ್ರರಿದ್ದಾರೆ . ಇವರ ಸಂಪೂರ್ಣ ನಿರ್ನಾಮ ವಿಷ್ಣುವಿನ ಹನ್ನೊಂದನೇ ಅವತಾರದಲ್ಲಿ ಮಾತ್ರ ಸಾಧ್ಯ. ಅದಕ್ಕಾಗಿ ಕಾಯಲು ಸಾಧ್ಯವಿಲ್ಲ . ಇದಕ್ಕಾಗಿ ನಾವು ನಮ್ಮ ಹಿಂದೂ ಜನಾಂಗದ ರಕ್ಷಣೆಗಾಗಿ ನಮ್ಮ ಸಮಾಜದ ಸುತ್ತ ಭದ್ರಕೋಟೆ ನಿರ್ಮಿಸಿಕೊಳ್ಳಬೇಕು.
ಇದಕ್ಕೆಲ್ಲಾ ಒಂದೇ ಪರಿಹಾರವೆಂದರೆ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಗೌರವಿಸುವ , ನ್ಯಾಯಯುತವಾಗಿ ಆಡಳಿತ ನಡೆಸುವ, ಸುಭದ್ರ ಸರ್ಕಾರವನ್ನು ಸ್ಥಾಪಿಸುವುದು. ನಮ್ಮ ಮುಂದೆ ಸಧ್ಯದಲ್ಲೇ ರಾಷ್ಟ್ರ ಸಾರ್ವತ್ರಿಕ ಚುನಾವಣೆಗಳು ಬರಲಿವೆ. ನಾವೆಲ್ಲರೂ ನಮ್ಮ ವಿವೇಕವನ್ನು ಬಳಸಿ ಉತ್ತಮ ರಾಜಕೀಯ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಹಾಗೂ ಅಖಂಡ ಹಿಂದೂ ಸುಖೀ ರಾಷ್ಟ್ರದ ನಿರ್ಮಾಣವಾಗಬೇಕು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲೇಬೇಕು. ಈಗಾಗಲೇ ಇಡೀ ದೇಶದ ಮಹತ್ವಾಕಾಂಕ್ಷೆಯ ರಾಮಮಂದಿರದ ನಿರ್ಮಾಣವಾಗುತ್ತಿದೆ. ಇದರ ಮುಂದುವರಿದ ಭಾಗವೇ ರಾಮರಾಜ್ಯದ ಪುನರ್ ನಿರ್ಮಾಣ. ನಾವೆಲ್ಲರೂ ಒಗ್ಗೂಡಿ ಮನಸ್ಸು ಮಾಡಿದಲ್ಲಿ ಇದು ಖಂಡಿತಾ ಅಸಾಧ್ಯವಾದುದಲ್ಲ.
ಇದು ದೀಪಗಳ ಹಬ್ಬ. ದೀಪ ಎಂಬುದು ಬೆಳಕು. ಸಮಸ್ತ ಲೋಕದ ಜನರಿಗೆ ಈ ಬೆಳಕು ಅಥವಾ ದೀಪ ಸನ್ಮಾರ್ಗದಲ್ಲಿ ನಡೆಯಲು ದಾರಿ ದೀವಿಗೆಯಾಗಲಿ.
ಆ ಭಗವಂತನು ತಮ್ಮೆಲ್ಲರಿಗೂ , ತಮ್ಮ ಬಂಧುಬಳಗ ಮತ್ತು ಸ್ನೇಹಿತರಿಗಳಿಗೂ ಕೂಡಾ ಆಯುರಾರೋಗ್ಯ ಐಶ್ವರ್ಯ ಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಹಾಗೂ ವಿಶೇಷವಾಗಿ ನಾವೆಲ್ಲರೂ ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ. ಕಲಿಯುಗದಲ್ಲಿ “ *ಸಾಮೂಹಿಕ ಪ್ರಾರ್ಥನೆಗೆ”* ವಿಶೇಷ ಶಕ್ತಿಯಿದೆ. ತಾವೆಲ್ಲರೂ ತಮ್ಮ ಕುಟುಂಬ ವರ್ಗದೊಂದಿಗೆ ಪ್ರತಿದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದಲ್ಲಿ ತಮ್ಮ ಕುಟುಂಬಕ್ಕೂ, ಭೂಲೋಕಕ್ಕೂ ಒಳ್ಳೆಯದಾಗುವುದರಲ್ಲಿ ಯಾವುದೇ ಸಂಶಯವಿಲ್ಲ .
ವಿಶೇಷವಾಗಿ ಮಹಾತಾಯಿ ಲಕ್ಷ್ಮೀದೇವಿಯು ನಮ್ಮೆಲ್ಲರ ಮನೆಗಳಿಗೂ ಬಂದು ಹರಸಿ ಶಾಶ್ವತವಾಗಿ ನೆಲೆನಿಲ್ಲುವಂತಾಗಲಿ.
*।। ಯಾ ದೇವಿ* *ಸರ್ವಭೂತೇಷು* *ಮಾತೃರೂಪೇಣ* *ಸಂಸ್ಥಿತಾ ನಮಸ್ತಸ್ಯೈ* *ನಮಸ್ತಸ್ಯೈ ನಮಸ್ತಸ್ಯೈ* *ನಮೋನಮಃ ।।*
*।। ಲೋಕಾಃ ಸಮಸ್ತಾಃ* *ಸುಖಿನೋ* *ಭವಂತು।* *ಸಮಸ್ತ* *ಸನ್ಮಂಗಲಾನಿ* *ಭವಂತು।।*
- ಇತಿ ಸದಾ ಸಜ್ಜನರ ವಿಧೇಯ